SEX ಮೂಲಕವೂ ಹರಡುತ್ತದಾ ಡೆಂಘ್ಯೂ!!.....

Mon, Nov 11, 2019

ಮ್ಯಾಡ್ರಿಡ್ : ಈಡಿಸ್ ಈಜಿಪ್ಟಿ ಎಂಬ ಸೊಳ್ಳೆ ಕಚ್ಚಿದರೆ ಡೆಂಘೀ ಬರುವುದೆಂದು ಬಹುತೇಕರಿಗೆ ಗೊತ್ತು. ಆದರೆ ಈ ಸೊಳ್ಳೆಯೊಂದೇ ಅಲ್ಲ, ಡೆಂಘೀಪೀಡಿತ ವ್ಯಕ್ತಿಯ ಜತೆ ಲೈಂಗಿಕ ಕ್ರಿಯೆ ನಡೆಸಿದರೂ ವೈರಾಣು ಹಬ್ಬುತ್ತದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. 


ಲೈಂಗಿಕ ಕ್ರಿಯೆ ಮೂಲಕ ಹರಡಲ್ಪಟ್ಟ ವಿಶ್ವದ ಮೊದಲ ಡೆಂಘೀ ಪ್ರಕರಣವನ್ನು ಸ್ಪೇನ್ ವೈದ್ಯರು ಪತ್ತೆ ಮಾಡಿದ್ದಾರೆ. 

ಹೌದು; ಕಳೆದ ಸೆಪ್ಟೆಂಬರ್‌ನಲ್ಲಿ 41 ವರ್ಷದ ವ್ಯಕ್ತಿಯಲ್ಲಿ ಡೆಂಘೀ ಕಾಣಿಸಿಕೊಂಡು, ದೃಢಪಟ್ಟಿತ್ತು. ಅವರಿಗೆ ಹೇಗೆ ವೈರಾಣು ಸೋಂಕು ತಗುಲಿತು ಎಂದು ಅಧಿಕಾರಿಗಳಿಗೆ ಗೊತ್ತಾಗಲಿಲ್ಲ. ಏಕೆಂದರೆ, ಆ ವ್ಯಕ್ತಿ ಜ್ವರ ಪತ್ತೆಯಾದ ಪ್ರದೇಶಗ ಳಲ್ಲಿ ವಾಸಿಸಿರಲಿಲ್ಲ. ವೈರಾಣುಗಳು ಹೆಚ್ಚಿರುವ ಪ್ರದೇಶಕ್ಕೆ ಭೇಟಿ ನೀಡಿದ್ದರಾದರೂ, ಅಲ್ಲೂ ಅವರಿಗೆಸೋಂಕು ಅಂಟಿರಲಿಲ್ಲ. ಕೊನೆಗೆ ಕೂಲಂಕಷವಾಗಿ ಪರಿಶೀಲಿಸಿದಾಗ, ಪುರುಷ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸಿದಾಗ ವೈರಾಣು ಹಬ್ಬಿರುವ ಸಾಧ್ಯತೆ ಕಂಡುಬಂತು. ಆತನ ವೀರ‌್ಯಾಣು ಪರೀಕ್ಷೆಗೆ ಒಳಪಡಿಸಿದಾಗ, ಅದರಲ್ಲಿ ಡೆಂಘೀ ವೈರಾಣು ಇದ್ದವು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

Like our news?