ಕರಾಚಿ : ಲಂಧಿಯಲ್ಲಿ ಹೇಯ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಇಸ್ಮಾಯಿಲ್ ಗೋಥ್ ಸ್ಮಶಾನದಲ್ಲಿ ನಾಲ್ಕು ದಿನದ ಹಿಂದೆ ಮೃತಪಟ್ಟ ಮಹಿಳೆಯ ಶವವನ್ನು ಒಂದಷ್ಟು ಜನರ ಗುಂಪು ಸಮಾಧಿಯಿಂದ ಹೊರತೆಗೆದು ಅದರ ಮೇಲೆ ಅತ್ಯಾಚಾರವನ್ನೂ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮಹಿಳೆಯ ಕುಟುಂಬ ಮರುದಿನ ಮತ್ತೊಮ್ಮೆ ಸ್ಮಶಾನಕ್ಕೆ ಹೋದಾಗ ಸಮಾಧಿಯ ಮೇಲ್ಭಾಗದಲ್ಲಿ ಮುಚ್ಚಲಾಗಿದ್ದ ಚಪ್ಪಡಿ ತೆಗೆದಿದ್ದು. ಈ ಬಗ್ಗೆ ಸ್ಮಶಾನದ ಉಸ್ತುವಾರಿ ನೋಡಿಕೊಳ್ಳುವಾತನನ್ನು ಪ್ರಶ್ನಿಸಿದಾಗ, ನಾಯಿಯೊಂದು ಆ ಚಪ್ಪಡಿಯನ್ನು ತೆಗೆದಿದೆ ಎಂದು ಸಮಜಾಯಿಷಿ ನೀಡಿದ್ದಾನೆ.ಆದರೆ ಅದು ನಾಯಿ ತೆಗೆದು ಹಾಕುವಷ್ಟು ಹಗುರವಾಗಿಲ್ಲ ಎಂದು ವಾದಿಸಿದ ಕುಟುಂಬದವರು ಕೂಡಲೇ ಪೊಲೀಸರ ಬಳಿ ಹೋಗಿ ವಿಷಯ ತಿಳಿಸಿದ್ದಾರೆ.ಮೃತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾಗಿದೆ. ಸದ್ಯ ಸ್ಮಶಾನ ಉಸ್ತುವಾರಿಯೂ ನಾಪತ್ತೆಯಾಗಿದ್ದಾನೆ. ಎಷ್ಟು ಜನ ಸೇರಿ ಈ ಕೃತ್ಯ ಮಾಡಿದ್ದಾರೆ, ಅವರು ಯಾರು ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
◆ಜಾಹೀರಾತು◆
Sign up here to get the latest post directly to your inbox.