ಮೇಕ್ ಇನ್ ಇಂಡಿಯಾ ಎಫೆಕ್ಟ್, ವಿಶ್ವಬ್ಯಾಂಕ್‍ನ ಇಓಡಿಬಿ 63ನೇ ಸ್ಥಾನಕ್ಕೇರಿದ ಭಾರತ..!Unionbank#India#Make in India#Top# ...

Thu, Oct 24, 2019

ವಾಷಿಂಗ್ಟನ್:  ಸುಲಲಿತವಾಗಿ ವಾಣಿಜ್ಯ-ವಹಿವಾಟು ನಡೆಸಲು ಸಾಧ್ಯವಾಗುವ (ಈಸಿ ಆಫ್ ಡೂಯಿಂಗ್ ಬ್ಯುಸಿನೆಸ್) ಜಾಗತಿಕ ಶ್ರೇಣಿಯ ಪಟ್ಟಿಯನ್ನು ವಿಶ್ವ ಬ್ಯಾಂಕ್ ಇಂದು ಬಿಡುಗಡೆ ಮಾಡಿದೆ.  ಈ ಪಟ್ಟಿಯಲ್ಲಿ ಭಾರತ 14 ಸ್ಥಾನ ಮೇಲೆ ಅಂದರೆ 63ನೇ ಶ್ರೇಯಾಂಕ ತಲುಪಿದೆ. ಅಲ್ಲದೇ ಭಾರತವು ಸತತ ಮೂರನೇ ಬಾರಿಗೆ ಪಟ್ಟಿಯಲ್ಲಿ ಟಾಪ್ 10 ಸಾಧಕರ ಸ್ಥಾನದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ಕೈಗೊಂಡ ಇತರ ಸುಧಾರಣೆಗಳಿಂದಾಗಿ 2016 ರಲ್ಲಿ 130 ನೇ ಸ್ಥಾನದಲ್ಲಿದ್ದ ಭಾರತ ಈಗ 63 ಸ್ಥಾನಕ್ಕೆ ಏರಿದೆ. ಶ್ರೇಯಾಂಕ ಪಟ್ಟಿಯಲ್ಲಿ ಆರೋಹಣ ಶ್ರೇಯವನ್ನು ತನ್ನದಾಗಿಸಿಕೊಂಡಿದೆ.

Like our news?