ಮತ್ತೋರ್ವ ಹಿಂದು ನಾಯಕನ ಸರಣಿ ಕೊಲೆ : ಬೆಚ್ಚಿಬಿದ್ದ ಜನತೆ...Hindhu#Leader#Murder#...

Fri, Oct 18, 2019

ಉ.ಪ್ರದೇಶ : ಲಕ್ನೋದಲ್ಲಿ ಇದೇ ತಿಂಗಳಲ್ಲಿ ಸರಣಿಯಾಗಿ ಹಿಂದೂ ನಾಯಕರ ಹತ್ಯೆ ನಡೆಯುತ್ತಿದ್ದು, ಈ ತಿಂಗಳಲ್ಲಿ ನಡೆದ ನಾಲ್ಕನೇ ಹತ್ಯೆ ಇದಾಗಿದೆ. ಅ.8ರಂದು ಬಿಜೆಪಿಯ ಚೌದರಿ ಯಶ್​ಪಾಲ್​ ಸಿಂಗ್​, ಅ.10ರಂದು ಬಿಜೆಪಿ ನಾಯಕ ಕಬೀರ್​ ತಿವಾರಿ ಯನ್ನು ಬಸ್ತಿಯಲ್ಲಿ ಹತ್ಯೆ ಮಾಡಲಾಗಿತ್ತು. ಅ.13ರಂದು ಬಿಜೆಪಿ ಕಾರ್ಪೊರೇಟರ್​ ಧಾರಾ ಸಿಂಗ್​ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇದೀಗ ಹಿಂದೂ ಮಹಾಸಭಾ ಅಧ್ಯಕ್ಷ  ಕಮಲೇಶ್ ತಿವಾರಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.


ಇತ್ತೀಚೆಗೆ ತಿವಾರಿ ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಆದರೆ ಇಂದು ತಿವಾರಿ ಗೃಹ ಕಛೇರಿಗೆ ಸ್ವೀಟ್ ಬಾಕ್ಸ್ ನೊಂದಿಗೆ ಬಂದ ಇಬ್ಬರು , ಸಿಹಿ ತಿನಿಸೋ ನೆಪದಲ್ಲಿ  ಬಾಕ್ಸ್ ನಲ್ಲಿದ್ದ ಗನ್ನಿಂದ ಶೂಟ್ ಮಾಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Like our news?