ಹನಿಟ್ರ್ಯಾಪ್ ಮಾಡಿ ಜೈಲು ಪಾಲಾದ ಕ.ರ.ವೇ ನಾಯಕಿ ಮತ್ತು ಬಿಜೆಪಿ ನಾಯಕ...! #honey trap# accused arrested

Wed, Sep 26, 2018

ಮಂಗಳೂರು:ಕಾಮವಾಂಚೆಯುಳ್ಳ ವೃದ್ಧರೋರ್ವರನ್ನು ಹನಿಟ್ರ್ಯಾಪ್ ಗೆ ಸಿಲುಕಿಸಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮತ್ತು ಬಿಜೆಪಿ ಯುವಮೋರ್ಚಾದ ನಾಯಕ ಜೈಲು ಪಾಲಾಗಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಲತಾ ಮತ್ತು ಕುತ್ತಾರು ಸುಭಾಷ್ ನಗರ ನಿವಾಸಿ ಬಿಜೆಪಿ ಯುವಮೋರ್ಚಾ ಮುಖಂಡ ರಾಕೇಶ್ ಯಾನೆ ರಾಕಿ ಎಂಬವರೇ ಜೈಲು ಪಾಲಾದವರು.

ದಿನಾಂಕ 23-09-2018 ರಂದು ಕೇರಳ ಮೂಲದ ಕಾಮವಾಂಚೆಯುಳ್ಳ ವೃದ್ದರೋರ್ವರಿಗೆ ಮಹಿಳೆಯೋರ್ವರು ದೂರವಾಣಿ ಕರೆ ಮಾಡಿ ಮಂಗಳೂರು ನಗರದ ಲೇಡಿಹಿಲ್ ಸ್ಟೇಡಿಯಂ ಬಳಿಗೆ ಬರುವಂತೆ ತಿಳಿಸಿ ವೃದ್ದರು ಕಾರಿನಲ್ಲಿ ಸ್ಟೇಡಿಯಂ ಬಳಿಗೆ ಬಂದಾಗ ವೃದ್ದರನ್ನು ಮಹಿಳೆ ಮತ್ತು 4 ಮಂದಿ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿ ಸುರತ್ಕಲ್ ನ ಹಿಂದೂ ಮಹಾಸಭಾದ  ಮುಖಂಡನೆಂದು ಕರೆಸಿಕೊಳ್ಳುವ ರಾಜೇಶ್ ಪವಿತ್ರನ್ ಎಂಬವರ ಮನೆಯಲ್ಲಿ ಕೂಡಿ ಹಾಕಿ, ತಲಾ 5 ಲಕ್ಷ ಹಣ ಕೊಡಬೇಕೆಂದು ಇಲ್ಲದಿದ್ದಲ್ಲಿ  ಮೆಮೋರಿ ಕಾರ್ಡ್ ನಲ್ಲಿರುವ ಅಶ್ಲೀಲ ಚಿತ್ರಗಳನ್ನು ಮಾದ್ಯಮಗಳಿಗೆ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆನ್ನಲಾಗಿದೆ. ವೃದ್ದರು ಆರೋಪಿಗಳು ಬೇಡಿಕೆ ಇಟ್ಟ ಹಣ ಕೊಡದಿದ್ದಾಗ ಆತನಿಗೆ ಎಲ್ಲರೂ ಸೇರಿ ಹಲ್ಲೆ ನಡೆಸಿ ಬಲಾತ್ಕಾರವಾಗಿ ಕುತ್ತಿಗೆಯಲ್ಲಿದ್ದ 4 ½ ಪವನ್ ತೂಕದ  ಚಿನ್ನದ ಚೈನ್ -1, ಚಿನ್ನದ ಉಂಗರ-2, ವಾಚು -1, ನಗದು        ರೂ. 18,000/- ಗಳನ್ನು ದರೋಡೆ ಮಾಡಿರುತ್ತಾರೆ. ದರೋಡೆಗೆ ಒಳಗಾದ ವೃದ್ಧರು ಠಾಣೆಗೆ ಬಂದು  ಪಿರ್ಯಾದಿ ನೀಡಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 155/2018   ಕಲಂ: 120 (ಬಿ), 365, 342, 323, 395, 385, 506, ಜೊತೆಗೆ 149 ಐಪಿಸಿ ರಂತೆ ದಾಖಲಾಗಿರುತ್ತದೆ.

ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ  ಕರ್ನಾಟಕ  ರಕ್ಷಣಾ ವೇದಿಕೆಯ ಮಹಿಳಾ ತಾಲೂಕು ಅಧ್ಯಕ್ಷೆಯಾದ ಆರೋಪಿ ಶ್ರೀಲತಾ ಮತ್ತು ಬಿಜೆಪಿ ಯುವಮೋರ್ಚಾ ಮುಖಂಡ ರಾಕೇಶ್ ಎಂಬವರನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಿಂದ  ಪಿರ್ಯಾದಿದಾರರಿಂದ ದರೋಡೆಗೆ ಒಳಗಾದ 4 ½ ಪವನ್ ತೂಕದ  ಚಿನ್ನದ ಚೈನ್ -1, ಚಿನ್ನದ ಉಂಗರ-2, ವಾಚು -1, ಮತ್ತು ಆರೋಪಿತರಲ್ಲಿದ್ದ ಮೆಮೋರಿ ಕಾರ್ಡ್ ನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಪ್ರಕರಣದಲ್ಲಿ ಉಳಿದ ಆರೋಪಿಗಳ ದಸ್ತಗಿರಿ ಬಾಕಿ ಇದ್ದು, ಆರೋಪಿಗಳು ತಲೆ ಮರೆಸಿಕೊಂಡಿರುತ್ತಾರೆ.


ಮಂಗಳೂರು ನಗರದ ಮಾನ್ಯ ಪೊಲೀಸ್ ಉಪ ಆಯುಕ್ತರಾದ ಶ್ರೀಮತಿ ಉಮಾ ಪ್ರಶಾಂತ್ ರವರ ನಿರ್ದೇಶನದಂತೆ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ   ಶ್ರೀ ಉದಯ ನಾಯಕ್ ರವರ ಮಾರ್ಗದರ್ಶನದಂತೆ  ಬರ್ಕೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಕೆ.ಕೆ. ರಾಮಕೃಷ್ಣ ಮತ್ತು ಸಿಬ್ಬಂದಿಯವರು ಮತ್ತು ಉರ್ವ ಪೊಲೀಸು ಠಾಣೆ ಪೊಲೀಸ್ ನಿರೀಕ್ಷಕರಾದ ಶ್ರೀ ರವೀಶ್ ನಾಯಕ್ ಮತ್ತು ಸಿಬ್ಬಂದಿಯವರು ಆರೋಪಿಗಳ ಪತ್ತೆ ಮತ್ತು ಬಂಧನ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.


Like our news?
Copyrights

*