ದುಬೈ: ಭಾನುವಾರದ ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತದ ಗೆಲುವನ್ನು ಕಂಡು ಪಾಕ್ನ ಯುವತಿಯೊಬ್ಬಳು ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.
ಕಪ್ಪು ಬುರ್ಖಾ ತೊಟ್ಟಿದ್ದ ಪಾಕ್ ಯುವತಿಯೊಬ್ಬಳು ರೋಹಿತ್ ಶರ್ಮ ತಂಡದ ಗೆಲುವನ್ನು ಕಂಡು ಭಾರತದ ಬಾವುಟವನ್ನು ಹಿಡಿದು ಹಾರಿಸಿದ್ದಾಳೆ. ಅಕ್ಕಪಕ್ಕದಲ್ಲಿ ಕುಳಿತ್ತಿದ್ದವರು ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದರೂ ಕ್ಯಾರೇ ಅನ್ನದೇ ಯುವತಿ ಭಾರತದ ಬಾವುಟವನ್ನು ಹರ್ಷದಿಂದ ಹಾರಿಸಿದ್ದಾಳೆ.
ಪಾಕ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭಿಕರಾದ ಧವನ್ ಹಾಗೂ ರೋಹಿತ್ ಶರ್ಮಾ ಅತ್ಯುತ್ತಮ ಆರಂಭ ನೀಡಿದರು. ಪಂದ್ಯದ 5ನೇ ಓವರ್ ಶಹೇನ್ ಬೌಲಿಂಗ್ ನಲ್ಲಿ ಇಮಾಮ್ ರಿಂದ ಜೀವದಾನ ಪಡೆದ ರೋಹಿತ್ ಶರ್ಮಾ ವೃತ್ತಿ ಜೀವನದ 19ನೇ ಶತಕ ಪೂರೈಸಿದರು. ಪಾಕ್ ಬೌಲರ್ ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಈ ಜೋಡಿ ಟೀಂ ಇಂಡಿಯಾ ಪರ 210 ದಾಖಲೆ ರನ್ ಜೊತೆಯಾಟ ನೀಡಿತು. ಅಲ್ಲದೇ ಕೇವಲ 39.3 ಓವರ್ ಗಳಲ್ಲಿ 238 ರನ್ ಸಿಡಿಸಿ 9 ವಿಕೆಟ್ ಗಳ ಗೆಲುವಿನ ಸಿಹಿ ಪಡೆಯಿತು.
Sign up here to get the latest post directly to your inbox.