ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಕಂಡು ಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ!! ಯೋಗಿ ಆದಿತ್ಯನಾಥರ ಆಡಳಿತದಿಂದಾಗಿ ಇಡೀ ಉತ್ತರಪ್ರದೇಶ ರಾಜ್ಯ ಅದೆಷ್ಟು ಬದಲಾವಣೆಯನ್ನು ಕಂಡಿದೆ ಎಂದರೆ ಅಟ್ಟಹಾಸದಿಂದ ಬೀಗುತ್ತಿದ್ದ ರೌಡಿಗಳು ತಮ್ಮ ವರಸೆಯನ್ನೇ ಬದಲಾಯಿಸಿಕೊಂಡು ಮಾಮುಲಿ ಮನುಷ್ಯರಂತೆ ಬದುಕುತ್ತಿದ್ದಾರೆ ಎಂದರೆ ಯೋಗಿ ಆದಿತ್ಯನಾಥರ ಆಡಳಿತ ಅದೆಷ್ಟು ಸಮರ್ಥವಾಗಿದೆ ಎನ್ನುವುದನ್ನು ಗಮನಿಸಬಹುದು!! ಅಷ್ಟೇ ಅಲ್ಲದೇ ಫೈರ್ ಬ್ರ್ಯಾಂಡ್ ಖ್ಯಾತಿಯ ಯೋಗಿ ಆದಿತ್ಯನಾಥರು 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜಾರಿಗೆ ತಂದ ಪ್ರಮುಖ ಯೋಜನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು ಹೇಗೆ ಮನೆಮಾತಾಗಿವೆಯೋ, ಅವರು ಕೈಗೊಂಡ ಕಾನೂನು ಸುವ್ಯವಸ್ಥೆಯೂ ರಾಜ್ಯದ ಗಡಿದಾಟಿ ಸುದ್ದಿಯಾಗುತ್ತಿದೆ. ಇದೀಗ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮತ್ತೊಂದು ಮಹತ್ವಪೂರ್ಣ ನಿರ್ಧಾರವನ್ನು ಕೈಗೊಂಡಿದ್ದಾರೆ.
ಹೌದು ಇದೀಗ ಉತ್ತರ ಪ್ರದೇಶದ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ರಸ್ತೆಯನ್ನು ಆಕರ್ಷಕವಾಗಿ ಅಭಿವೃದ್ಧಿ ಪಡಿಸಿ ಅದಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ `ಅಟಲ್ ಗೌರವ್ ಪಥ’ ಎಂದು ಹೆಸರಿಡಲಾಗುವುದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ತಿಳಿಸಿದ್ದಾರೆ. ಈ ರಸ್ತೆಗಳನ್ನು ಸುಂದರವಾಗಿ ನಿರ್ಮಿಸುವುದರೊಂದಿಗೆ ಎಲ್ಲ ಅಗತ್ಯತೆ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಪ್ರತಿ ನಗರ ಸ್ಥಳೀಯ ಸಂಸ್ಥೆಯು ಸಹ ಚರಂಡಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಅವುಗಳನ್ನು ಮುಚ್ಚುವಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ!!
ಸ್ಥಳೀಯ ಸಂಸ್ಥೆಗಳ ನಿರ್ದೇಶನಾಲಯದ ಪ್ರಕಾರ 16 ಮುನಿಸಿಪಲ್ ಕಾರ್ಪೊರೇಷನ್, 198 ನಗರ ಪಾಲಿಕೆ ಮತ್ತು 438 ನಗರ ಪಂಚಾಯಿತಿಗಳು ರಾಜ್ಯದಲ್ಲಿವೆ. ಈಗಾಗಲೇ ಇರುವ `ನಮಾಮಿ ಗಂಗೆ’, `ಅಮೃತ ಯೋಜನೆ’ ಮತ್ತು `ಸ್ಮಾರ್ಟ್ ಮಿಷನ್’ ಯೋಜನೆಗಳನ್ನು ಪರಿಶೀಲಿಸಲಾಗುತ್ತದೆ. ವಿಶ್ವದಾದ್ಯಂತ ಹಲವಾರು ಜನರು ಕುಂಬಮೇಳ 2019ಕ್ಕೆ ಭೇಟಿ ನೀಡಲಿದ್ದು, ಮುಂದಿನ ವರ್ಷ ಜನವರಿ 15 ರಿಂದ ಮಾರ್ಚ್ 4ರ ವರೆಗೆ ಅಲಹಾಬಾದ್ನಲ್ಲಿ ನಡೆಯಲಿದೆ ಎಂದರು.
Sign up here to get the latest post directly to your inbox.