ಮುಂದಿನ ಸರ್ಜಿಕಲ್ ದಾಳಿಯಿಂದ ನಕಲಿ ವೈದ್ಯರಿಗೆ ಬ್ರೇಕ್ :ನಕಲಿ ವೈದ್ಯರ ಹಾವಳಿಗೆ ಕಾನೂನಿನ ಮೂಗುದಾರ

Thu, Jul 26, 2018

ದೇಶದ ಪ್ರತಿಯೋಬ್ಬರು  ಕೂಡ ಪದವಿ ಹೊಂದಿರುವ ಪ್ರತಿ 3 ರಿಂದ5 ವರ್ಷದೊಳಗೆ ಪರೀಕ್ಷೆ ಬರೆದು ತಾನು ವೈದ್ಯ ವೃತ್ತಿಗೆ ಯೋಗ್ಯನೆಂದು ಸಾಬೀತುಪಡಿಸುವ ಕ್ರಮದ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ.

ಅಂದಿನ ಹೆಸರಾಂತ ವೈದ್ಯ, ಪರಿಣತ ವೈದ್ಯರಾದ ಚರಕನ ಕಾಲದಿಂದಲೂ ಇರುವ ನಕಲಿ ವೈದ್ಯರ ದಂಧೆ ತಡೆಗಟ್ಟಲು ಕೇವಲ ದಾಳಿ ಮಾಡಿದರೆ, ಅದನ್ನು ಹೋಗಲಾಡಿಸಲು ಅಸಾಧ್ಯ. ನಕಲಿ ವೈದ್ಯರ ಹಾವಳಿ ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಇದನ್ನು ತಡೆಯಲು ಕಾನೂನಿನ ಮೂಗುದಾರ ಬೇಕೆಬೇಕು. ಅಂದಾಗ ಮಾತ್ರ ನಕಲಿ ವೈದ್ಯ ಎನ್ನುವ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಲು ಸಾಧ್ಯವಾಗದಿದ್ದರೂ, ಅದನ್ನು ಬಹುತೇಕ ತಡೆಯುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ಸರ್ಜಿಕಲ್ ದಾಲಿಯಿಂದ  ಸಾಧ್ಯವಾಗುತ್ತದೆ.


ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಆರೋಗ್ಯ ವಿಭಾಗದಲ್ಲಿ ಹಲವಾರು ಬದಲಾವಣೆಗಳನ್ನು ತರುವಲ್ಲಿ ಸಿದ್ಧವಾಗಿದೆ, ಇದರ ಪ್ರಕಾರ ದೇಶದ ಎಂಬಿಬಿಎಸ್. ಎಂಡಿ ಪದವಿ ಹೊಂದಿರುವ ವೈದ್ಯರು 3ರಿಂದ 5 ವರ್ಷದ ಅಂರತರದಲ್ಲಿ ಸರ್ಕಾರ ನಡೆಸುವ ಪರೀಕ್ಷೆತಲ್ಲಿ ಉತ್ತೀರ್ಣರಾದರೆ ಮಾತ್ರ ವೃತ್ತಿಯನ್ನು ಮುನ್ನಡೆಸಲು ಯೋಗ್ಯರಾಗಿದ್ದಾರೆ. ಆರೋಗ್ಯ ಸಚಿವಾಲಯವು ಮುಂದಿನ ವರ್ಷಾರಂಭಕ್ಕೆ ಈ ಯೋಜನೆಯನ್ನು ಕಾರ್ಯಗತಗೊಳಿಸಲು ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ ಈ ನಿಯಮವನ್ನು ಜಾರಿಗೆ ತರುವ ಮೂಲಕ ದೇಶದಲ್ಲಿರುವ ನಕಲಿ ವೈದ್ಯರಿಗೆ ಬ್ರೇಕ್ ಹಾಕಲಿದ್ದು, ಇದರ ಬಗ್ಗೆ ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ (IMA) ನೊಂದಿಗೆ ತನ್ನ ಅಭಿಪ್ರಾಯ ನೀಡುವಂತೆ ಸರ್ಕಾರ ತಿಳಿಸಿದೆ. ಈ ರೀತಿಯ ಯೋಜನೆಯು ಅಮೇರಿಕಾ ಮತ್ತು ಯುರೋಪಿಯನ್ ದೇಶಗಳಲ್ಲಿ ಮೊದಲಿನಿಂದಲೂ ನಡೆಸಲಾಗುತ್ತಿದೆ. ಮಾಹಿತಿಯ ಪ್ರಕಾರ ಮೊತ್ತ ಮೊದಲಲಾಗಿ ಕೇಂದ್ರ ಸರ್ಕಾರ ಆರೋಗ್ಯ ಯೋಜನೆ (CGHS) ಮತ್ತು ಎಂಪ್ಲಾಯಿಸ್ ಸ್ಟೇಟ್ ಇನ್ಸೂರೆನ್ಸ್ ಹಾಸ್ಪಿಟಲ್ಸ್ ಪರೀಕ್ಷೆ ನಡೆಸಬೇಕಾಗಿದೆ, ನಂತರ ಸರಕಾರ ಆರೋಗ್ಯ ಅನುಮೊದನೆ ನೀಡಿದ ಬಳಿಕ ದೇಶದಾದ್ಯಂತ ಈ ಯೋಜನೆಯನ್ನು ಕಾರ್ಯಗತ ಗೊಳಿಸಲಾಗುತ್ತದೆ.ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ ಆರೋಗ್ಯ ವಲಯದಲ್ಲಿ ಶೀಘ್ರದಲ್ಲಿಯೇ ಬದಲಾವಣೆಯನ್ನು ತರಲಿದೆ. ಅದಕ್ಕೆ ಅಂತಿಮವಾಗಿ ಕೇಂದ್ರೀಯ ಮಂತ್ರಿ ಮಂಡಲವು ಸಹಿ ಹಾಕಲಿದೆ. ವರದಿಯ ಪ್ರಕಾರ ಮೆಡಿಕಲ್ ವಿದ್ಯಾರ್ಥಿಗಳ ಕಳಪೆ ಪ್ರದರ್ಶನದಿಂದ ಯಾವುದೇ ಖಾಸಗಿ ಮತ್ತು ಸರ್ಕಾರಿ ಮೆಡಿಕಲ್ ಕಾಲೇಜುಗಳ ಪ್ರಮಾಣಪತ್ರ ಈ ನಿರ್ಧಾರದಿಂದ ರದ್ದುಗೊಳ್ಳುವ ಸಾಧ್ಯತೆಗಳಿವೆ. ಇದಕ್ಕಾಗಿ ಆರೋಗ್ಯ ಸಚಿವಾಲಯವು ರಾಷ್ಡ್ರಿಯ ಸಮಿತಿಯನ್ನು ರಚಿಸಿ ಅದರ ಮೂಲಕ ಖಾಸಗಿ ಮತ್ತು ಸರ್ಕಾರಿ ಮೆಡಿಕಲ್ ಕಾಲೇಜುಗಳ ಕ್ಷಮತೆಯನ್ನು ಸಮಯಕ್ಕೆ ಸರಿಯಾಗಿ ತನಿಖೆ ನಡೆಸಿ ಅದರ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಲಿದೆ.

ನಕಲಿ ವೈದ್ಯರ ಸಮಸ್ಯೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಹಿಂದುಳಿದ ದೊಡ್ಡ ದೊಡ್ಡ ದೇಶಗಳಲ್ಲೂ ಇಂತಹ ಸಮಸ್ಯೆ ಇದ್ದೇ ಇದೆ. ದೇಶದಲ್ಲಿ ಅನಾದಿ ಕಾಲದಿಂದಲೂ ನಕಲಿ ವೈದ್ಯರ ಹಾವಳಿ ಇದ್ದರೂ, ಅದನ್ನು ತಡೆಯಲು ಸಾಧ್ಯವಾಗಿಲ್ಲ. ನಕಲಿ ವೈದ್ಯರನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು  ಹಾಕಿಕೊಂಡಿದೆ, ದಾಳಿಯ ಮೂಲಕ ನಕಲಿ ವೈದ್ಯರ ಸಮಸ್ಯೆಗೆ ಸಂಪೂರ್ಣ ಬ್ರೇಕ್ ಹಾಕಲು ಸಾಧ್ಯವಿಲ್ಲ. ಗ್ರಾಮೀಣ ಮಟ್ಟದಲ್ಲಿ ವ್ಯಾಪಕವಾಗಿರುವ ಇಂತಹ ದಂಧೆಗೆ ಪ್ರಬಲ ಕಾನೂನಿನ ಅಸ್ತ್ರ ಬೇಕಾಗಿದೆ.


Like our news?