ಆಗಷ್ಟ್ 20ಕ್ಕೆ ರಸುವಾ ಬಾಲಿವುಡ್ ಆಲ್ಬಮ್ ಸಾಂಗ್ ಬಿಡುಗಡೆ...

Thu, Jul 26, 2018

ಹುಬ್ಬಳ್ಳಿ: ನಗರದ  ಅಲೋನ್ ಆ್ಯಂಡ್ ಕಂಪನಿಯ ವತಿಯಿಂದ ನಿರ್ಮಾಣ ಮಾಡಿರುವ ಬಾಲಿವುಡ್ ಹಿಂದಿ  ಆಲ್ಬಮ್ ವೀಡಿಯೋ ಸಾಂಗ್ ಆಗಿರುವ 'ರುಸುವಾ' ಅಲ್ಬಮ್ ಪೋಸ್ಟರ್ ಬಿಡುಗಡೆಯನ್ನು ಇಂದು ನಗರದಲ್ಲಿ ಹಾಗೂ ಅಲ್ಬಮ್ ಬಿಡುಗಡೆಯನ್ನು ಆಗಷ್ಟ 20ಕ್ಕೆ ನಗರದ  ಹೋಟೆಲ್ ನವೀನನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಇಸ್ರಾರ್ ಮಂಗಳೂರ ತಿಳಿಸಿದರು.


ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖ್ಯಾತ ಬಾಲಿವುಡ್ ಸಿಂಗರ್ ಮಹ್ಮದ ಇರ್ಪಾನ್, ನಿರ್ಮಾಪಕರಾದ  ಇಸ್ರಾರ್ ಮಂಗಳೂರ, ನಿರ್ದೇಶಕರಾದ ಅಜಾದ್ ಹುಸೇನ್ ಸಹಯೋಗದೊಂದಿಗೆ ಹುಬ್ಬಳ್ಳಿ ಪ್ರತಿಭೆಯಾದ ತೈಸಿನ್ ಮುಲ್ಲಾ ಅಲ್ಬಮ್ ಸಾಂಗ್ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೇ ಅಲೋನ ಕಂಪನಿಯಿಂದ ನಿರ್ಮಿಸಿರುವ ಮೂರನೇ ಆಲ್ಬಮ್ ಸಾಂಗ್ ಆಗಿರುವ ರಸುವಾ ಒಂದು ಉತ್ತರ ಕರ್ನಾಟಕ ಪ್ರತಿಭೆಯೊಂದು ಬಾಲಿವುಡ್‌ನಲ್ಲಿ ಮಿಂಚಿರುವ ಸಾಧನೆಯ ಪ್ರತೀಕವಾಗಿದೆ.


ಅಲ್ಲದೇ ಬಾಲಿವುಡ್ ಖ್ಯಾತ್ ನಟ ಅಮೀರಖಾನ ಸಹೋದರ ಪೈಸಲ್ ಖಾನ ಅವರೊಂದಿಗೆ ಟಾಸ್ಕ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶ ತೈಸಿನ್ ಅವರಿಗೆ ಒದಗಿ ಬಂದಿದೆ. ಅಲ್ಲದೇ ಉತ್ಕೃಷ್ಟ ಮಟ್ಟದ ಮ್ಯೂಸಿಕ್ ಕಂಪನಿಯಾದ ಟಿ- ಸಿರಿಸನಿಂದ ಅಲ್ಬಮ್‌ ಹೊರಬಂದಿದೆ. ಸುರತ್, ಮುಂಬೈ ಸೇರಿದಂತೆ ಉತ್ತರ ಭಾರತದಲ್ಲಿ ಚಿತ್ರಿಕರಣಗೊಂಡಿದೆ. ಅಲ್ಲದೇ ಆಗಷ್ಟ 20ರ ಸಮಾರಂಭಕ್ಕೆ ಬಾಲಿವುಡ್ ಖ್ಯಾತಿ ಪಡೆದ ಜಾನ್ ಇಬ್ರಾಹಿಂ, ಸಾರಾಖಾನ, ಸನಾಖಾನ, ರಾಣಿಕಾ ಆಚಾರ್ಯ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಸುವಾ ಅಲ್ಬಮ್ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.


Like our news?
Copyrights

*