ಕಲಾಪಕ್ಕೆ ಪತ್ರಕರ್ತರಿಗೆ ನಿರ್ಬಂಧ ಹಿನ್ನೆಲೆ ; ನಾಳೆ ರಾಜ್ಯಾದ್ಯಂತ ಪತ್ರಕರ್ತರ ಸಾಂಕೇತಿಕ ಪ್ರತಿಭಟನೆ..‌‌. Protest #journalist....

Thu, Oct 10, 2019


ಕರ್ನಾಟಕಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಪತ್ರಿಕೋದ್ಯಮಕ್ಕೆ  ಬ್ರೇಕ್ ಹಾಕಲೂ ಹೊರಟಿರುವ ಕರ್ನಾಟಕ ಸರ್ಕಾರ ವಿಧಾನ ಸಭೆ ಕಲಾಪಕ್ಕೆ ವಿದ್ಯುನ್ಮಾನ ಮಾಧ್ಯಮಗಳನ್ನು  ನಿರ್ಬಂಧಿಸಿರುವ ಮೂಲಕ ತೀವ್ರ ಖಂಡನೆಗೆ ಗುರಿಯಾಗಿದೆ.


ಈ ಹಿನ್ನೆಲೆಯಲ್ಲಿ ಪತ್ರಕರ್ತರು ಮಾಧ್ಯಮ ನೀತಿ ಸಂಹಿತೆ ರೂಪಿಸಿ ಅಥವಾ ಪುನರ್ ಪರಿಶೀಲನೆಗೆ ಆಗ್ರಹಿಸಿ  ನಾಳೆ ಪ್ರತಿಭಟನೆ ನಡೆಸಲಿದ್ದಾರೆ.

ಬೆಂಗಳೂರು ಆನಂದರಾವ್ ಸರ್ಕಲ್ ಬಳಿ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು  ಮತ್ತು ರಾಜ್ಯಾದ್ಯಂತ ನಾಳೆ ಬೆಳಿಗ್ಗೆ 9 ಕ್ಕೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ), ಪ್ರೆಸ್ ಕ್ಲಬ್, ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್, ವರದಿಗಾರರ ಕೂಟ ಸೇರಿದಂತೆ ಪತ್ರಕರ್ತರ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿ ಸರ್ಕಾರದ ಮಾಧ್ಯಮ ವಿರೋಧಿ ನೀತಿಯನ್ನು ಪ್ರಶ್ನಿಸಲಿವೆ.

Like our news?
Copyrights

*