ನೆರೆ ಪರಿಹಾರಕ್ಕೆ ದ್ವನಿ ಎತ್ತಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಹೈಕಮಾಂಡ್ ನಿಂದ ನೋಟಿಸ್ ಜಾರಿ.... #Basangouda patil #BJP #Notice...

Fri, Oct 04, 2019

ವಿಜಯಪುರ: ರಾಜ್ಯದಲ್ಲಾದ ನೆರೆ ಹಾವಳಿ ಗೆ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಸ್ವ ಪಕ್ಷದ ವಿರುದ್ದವೇ ಗುಡುಗಿದ ಹಿನ್ನೆಲೆಯಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಬಿಜೆಪಿ ಹೈ ಕಮಾಂಡನಿಂದ ನೋಟಿಸ್ ನೀಡಲಾಗಿದೆ.... 
ಹೌದು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಓಂ ಪಠಾಕ್ ಬಸನಗೌಡ ಪಾಟೀಲ್ ಯತ್ನಾಳಗೆ ನೋಟಿಸ್ ಜಾರಿ ಮಾಡಿದ್ದಾರೆ.

ನೀವು ಈಗಾಗಲೇ ನೀವು ನೆರೆ ಹಾವಳಿ ಕುರಿತು ಸ್ವ ಪಕ್ಷದ ವಿರುದ್ಧ  ರಾಷ್ಟ್ರೀಯ ನಾಯಕರ  ವಿರುದ್ಧ ಹೇಳಿಕೆಯನ್ನು ನೀಡಿರುವುದು ಎಷ್ಟು ಸರಿ.? ಎಂದು ಪ್ರಶ್ನಿಸಿ ಈ ನೋಟಿಸ್ ನಿಮಗೆ ತಲುಪಿ 10 ದಿನಗಳಲ್ಲಿ ನಮಗೆ ಉತ್ತರ ನೀಡಬೇಕು ಎಂದು ಖಡಕ್ ನೋಟಿಸ್ ಜಾರಿ ಮಾಡಿದ್ದಾರೆ.

Like our news?
Copyrights

*