ನ್ಯೂ ಟ್ರೇಂಡ್ ಕಲಾವಿದ ಮಹೇಶಗೌಡ,

Wed, Jun 20, 2018

ಕನ್ನಡ ಸಾಹಿತ್ಯ ಈ ಹಿಂದೆ ಹೇಗೆಲ್ಲಾ ಶ್ರಿಮಂತವಾಗಿತ್ತೋ ಅದೆ ರೀತಿ ಪ್ರಸ್ತುತ ದಿನಮಾನಕ್ಕೆ ಅನುಸಾರವಾಗಿ ಜನರಲ್ಲಿ ಹೊಸ ಟ್ರೆಂಡ್ ಕಲೆ ಆರಂಭಗೊಂಡಿರುವುದು ಅಚ್ಚರಿಯೆನಲ್ಲ ಆದರೆ ಇಲ್ಲೋಬ್ಬ ಕಲಾವಿದ ಕನ್ನಡ ಚಿತ್ರರಂಗದ ಅಭಿಮಾನದದಿಂದ ಮತ್ತು ತನ್ನ ಕಲೆಯನ್ನು ಸಾರ್ವಜನಿಕರಿಗೆ ಮುಟ್ಟಿಸಲು ಡಬ್ ಮಾಷ್ ಮಾಡಿ ಎಲ್ಲರನ್ನು ರಂಜಿಸುತ್ತಿದ್ದಾನೆ ಎನಪ್ಪ ಆಶ್ಚರ್ಯ ಅಂದರೆ ಪೇಸಬುಕ್ ಅವನ ಕಲಾವೇದಿಕೆಯಾಗಿದೆ ಹಾಗಿದ್ರೆ ಇಲ್ಲಿದೆ ನೋಡಿ ಪುಲ್ ಡಿಟೇಲ್ಸ್.

ಧಾರವಾಡ ಜಿಲ್ಲೆಯಲ್ಲಿ ಯಾರ ಮನೆಯ ಮೇಲೆ ನಿಂತು ಕಲ್ಲು ಎಸೆದರೆ ಅದು ಒಬ್ಬ ಕಲಾವಿದರ ಮನೆಯ ಮೇಲೆ ಬಿಳುತ್ತೆ ಎನ್ನುವ ಮಾತಿತ್ತು ಅದೇ ರೀತಿ ಜಿಲ್ಲೆಯಲ್ಲಿ ಕಲಾವಿದರ ಸಂಖ್ಯೆಯೆ ಹೆಚ್ಚು ಇದಕ್ಕೆ ನಿದರ್ಶನ ಎಂಬಂತೆ  ಮಹೇಶಗೌಡ ಬಸನಗೌಡ ಪಾಟೀಲ ಒಬ್ಬ ಡಬ್ ಮಾಷನಲ್ಲಿ ತನ್ನ ಕಲೆಯನ್ನು ಬಿಂಬಿಸಿದ್ದಾನೆ...
ಧಾರವಾಡದ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಈ ಯುವಕ ಸ್ಯಾಂಡಲವುಡನ ಹೆಸರಾಂತ ನಟರ ಚಲನಚಿತ್ರಗಳ ದೃಶ್ಯಗಳನ್ನು ಡಬಮಾಷ್ ಮಾಡೊದ್ರಲ್ಲಿ ಜನಪ್ರಿಯವಾಗಿದ್ದಾನೆ.ಅಲ್ಲದೇ ಸುಮಾರು 60 ಕ್ಕೂ ಹೆಚ್ಚು ಚಿತ್ರಗಳ ಡಬಮಾಷ್ ಮಾಡಿರೋ ಈ ಯುವಕ ರಾಜಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದರೂ ಸಿನಿಮಾ ರಂಗದಲ್ಲಿ ಹೆಸರು ಮಾಡುವ ಸದುದ್ದೇಶ ಹೊಂದಿದ್ದಾನೆ. ಹಾಗಿದ್ದರೆ ಈ ಯುವಕ ಮಾಡಿರೋ ಕೆಲವು ಸಿನಿಮಾ ಝಲಕಗಳನ್ನ ನೋಡಿಕೊಂಡು ಬರೋಣ.

ತಮ್ಮ ಸೋದರಮಾವನಿಂದಲೇ ರಂಗಭೂಮಿಯ ಕಲೆಗೆ ಆಕರ್ಷಿತನಾದ ಮಹೇಶಗೌಡ ತನ್ನ 28 ವಯಸ್ಸಿಗಾಗಲೇ ಒಬ್ಬ ಒಳ್ಳೆಯ ಕಲಾವಿದನಾಗಿ ಬಿಂಬಿತನಾಗಿದ್ದಾನೆ. ರಾಮಚಾರಿ, ರಾಜಾಹುಲಿ, ಗೂಗ್ಲಿ ಸೇರಿದಂತೆ ಸುಮಾರು 60 ಡಬಮಾಷಗಳನ್ನು ಮಾಡಿ ಊರಿನವರ ಹಾಗೂ ಜಿಲ್ಲೆಯವರ ಪ್ರಶಂಸೆಗೆ ಪಾತ್ರನಾಗಿದ್ದಾನೆ. ತಂದೆ ಬಸನಗೌಡ ತಾಯಿ ಶಾರದಾ ತಮ್ಮ ಮಗ ಸರ್ಕಾರಿ ಸೇವೆಯಲ್ಲಿರಬೇಕು ಎಂದು ಬಯಸಿದ್ದರು ಆದರೇ ಮಹೇಶನ ಒಲವು ಸಿನಿಮಾ ರಂಗದಲ್ಲಿ ಮಿಂದಿದೆ.ಅಲ್ಲದೇ ತನ್ನ ಎಂಟು ಜನ ಸಹಚರರೊಂದಿಗೆ ಟಿಮ್ ವರ್ಕ್ ಮಾಡುತ್ತಿರುವ ಮಹೇಶ ಕನ್ನಡ ಚಿತ್ರರಂಗದಲ್ಲಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾನೆ ಅವಕಾಶ ಒದಗಿ ಬಂದರೇ ಯಾವ ರೀತಿಯಾಗಿ ಬೆಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಉತ್ತರ ಕರ್ನಾಟಕ ಕಲಾವಿದರಗೆ ಒಳ್ಳೆಯ ವೇದಿಕೆ ಅವಶ್ಯಕತೆ ಇದೆ ಹಿಂದೆ ಹಲವಾರು ಕಲಾವಿದರು ಉತ್ತರ ಕರ್ನಾಟಕದ ಸೊಗಡನೇ ಇಟ್ಟುಕೊಂಡು  ತಮ್ಮ ಮಾತುಗಳ ಮುಖಾಂತರ ಕರ್ನಾಟಕದ ಜನರನ್ನ ರಂಜಿಸಿದ್ದಾರೆ ಅದೆ ರೀತಿ ಈ ಯುವಕ ಬೆಳೆಯಲಿ ಎಂಬುವುದೆ ನಮ್ ಆಶಯವಾಗಿದೆ...

Like our news?