ಗೂಗಲ್ ಗೆ ಶಾಕ್ ನೀಡಿದ 8 ನೇ ತರಗತಿ ಹುಡುಗ….

Thu, Jun 07, 2018

ಆ ವಿದ್ಯಾರ್ಥಿ ಓದುತ್ತಿರುವ ತರಗತಿ 8 , ವಯಸ್ಸು 13 ವರ್ಷ, ಸಾಮಾನ್ಯವಾಗಿ ಈ ವಯಸ್ಸಿನ ಹುಡುಗರು ಓದು, ಬರಹ, ಆಟ, ಪಾಠ, ತಿರುಗಾಟ ಇವುಗಳಲ್ಲಿ ತೊಡಗಿರುತ್ತಾರೆ.

ಆದರೆ ಈ ಪೋರ ಎಲ್ಲರಂತಲ್ಲ, ಈತ ಕೂಡ ಆಡುತ್ತಾನೆ ಆದರೆ ಹೊರಗಡೆ ಮೈದಾನದಲ್ಲಲ್ಲ ಮನೆಯ ಒಳಗಡೆಯೇ ಸ್ಮಾರ್ಟ್ ಫೋನ್ ನಲ್ಲಿ.

ತನ್ನದೇ ಆದ ಆಂಡ್ರಾಯ್ಡ್ ಗೇಮ್ ಒಂದನ್ನ ರಚಿಸಿ ಆಡುತ್ತಿದ್ದಾನೆ, ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್, ಕೋಡಿಂಗ್ ಮತ್ತು ಸಾಫ್ಟ್ ವೆರ್ ವಿಷಯಗಳಲ್ಲಿ ನಿಪುಣತೆ ಹೊಂದಿದ್ದಾನೆ ಮತ್ತು ಯಾರು ಮಾಡದ ಕೆಲಸವನ್ನ ಮಾಡುವ ಮೂಲಕ ಇದೀಗ ಪ್ರಪಂಚವೇ ಇವನ ಕಡೆ ತಿರುಗಿ ನೋಡುವಂತೆ ಮಾಡಿದ್ದಾನೆ.

ಈತನ ಹೆಸರು ವಿಷ್ಣು ಚಂದನ್, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ನಿವಾಸಿ, ಈತನ ತಂದೆ ಕಂಪ್ಯೂಟರ್ ಮೆಕಾನಿಕ್. ಚಿಕ್ಕ ವಯಸ್ಸಿನಿಂದಲೂ ಕಂಪ್ಯೂಟರ್ ಮೇಲೆ ಬಹಳಷ್ಟು ಆಸಕ್ತಿ ಹೊಂದಿದ್ದಾನೆ, ಚಿಕ್ಕ ಪುಟ್ಟ ವಿಷಯಗಳನ್ನ ತಂದೆಯಿಂದ ಕೇಳಿ ತಿಳಿದುಕೊಳ್ಳುತಿದ್ದ.

ತನ್ನ 5 ನೇ ವಯಸ್ಸಿನಲ್ಲೇ ಕಂಪ್ಯೂಟರ್ ಗ್ರಾಫಿಕ್, ಗೇಮಿಂಗ್, ಫೋಟೋ ಶಾಪ್, ಸಾಫ್ಟ್ ವೆರ್ ಇನ್ಸ್ಟಾಲಿಂಗ್ ಇವುಗಳನ್ನೆಲ್ಲ ಅರಿತಿದ್ದ.

ಶಾಲೆಯಿಂದ ಬಂದವನೇ ಕಂಪ್ಯೂಟರ್ ನಲ್ಲಿ ಏನೇನೋ ಮಾಡುತಿದ್ದ, ದಿನಾಲೂ ಗೇಮ್ ಆಡಿ ಬೋರ್ ಆಗುತಿದ್ದರಿಂದ ತನ್ನದೇ ಆದ ಹೊಸ ಗೇಮ್ ಒಂದನ್ನ ರಚಿಸಿ ಗೂಗಲ್ ಪ್ಲೇ ಸ್ಟೋರ್ ಗೆ ನೀಡಿದ್ದಾನೆ ಶೂಟಿಂಗ್, ರೇಸಿಂಗ್ , ಕಲ್ಲರಿಂಗ್, ಹಂಟಿಂಗ್ ಹೀಗೆ ವಿವಿಧ ಬಗೆಯ ಗೇಮ್ ಗಳನ್ನ ನೀಡಿದ್ದಾನೆ.

 


ಇಂಟರ್ನೆಟ್ ದಿಗ್ಗಜ ಗೂಗಲ್ ಈತನ ಪ್ರತಿಭೆಯನ್ನ ಗುರುತಿಸಿ ಕ್ಯಾಲಿಫೋರ್ನಿಯಾ ದಲ್ಲಿ ನಡೆಯಲಿರುವ ಇವೆಂಟ್ ಒಂದಕ್ಕೆ ಈತನನ್ನ ಆಹ್ವಾನಿಸಿದೆ, ಅಲ್ಲದೆ ಪ್ರಮುಖ ಕಂಪನಿಗಳಾದ ಸಂಸುಂಗ್, ಅಮೆಸೋನ್ ಈತನಿಗೆ ಸರಿಯಾದ ಶಿಕ್ಷಣ ನೀಡಿ ಉದ್ಯೋಗ ನೀಡುವ ಬರವಸೆಯನ್ನ ನೀಡಿದೆ.

 ಇನ್ನೊಂದು ವಿಷಯ ಇಷ್ಟೊಂದು ಹೆಸರು ಮಾಡಿರುವ ಈತ ಓದುತ್ತಿರುವುದು ಯಾವುದೋ ಖಾಸಗಿ ಶಾಲೆಯಲ್ಲಲ್ಲ ಒಂದು ಸರಕಾರಿ ಶಾಲೆಯಲ್ಲಿ.

Like our news?