ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಹುದಿನದ ಬಳಿಕ ಇಂದು ನಗರದ ಪ್ರದಕ್ಷಿಣೆ

Fri, Jun 01, 2018

-
ಹುಬ್ಬಳ್ಳಿ:::
ಮಾಜಿ ಸಿಎಂ ಜಗದೀಶ್ ಶೆಟ್ಟರ್  ಬಹುದಿನದ ಬಳಿಕ ಇಂದು ನಗರದ ಪ್ರದಕ್ಷಿಣೆ ಮಾಡಿದರು. ತೊಳನಕೇರಿ ಅಭಿವೃದ್ಧಿ ಕಾಮಗಾರಿ, ಹಾಗೂ ಉತ್ತರ ಕರ್ನಾಟಕ ದ ಮೊದಲ ಟೆಂಡರ್ ಶ್ಯೂರ ರಸ್ತೆ ಕಾಮಗಾರಿ ವೀಕ್ಷಿಸಿದರು. ಬಳಿಕ ಅಧಿಕಾರಿಗಳ ಸಭೆ ನಡೆಸಿದ ಶೆಟ್ಟರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 32 ಕೋಟಿ‌ ವೆಚ್ಚದಲ್ಲಿ 2.2 ,ಕಿಲೋಮೀಟರ್ ಉದ್ದದ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ವೇಗ ಪಡೆದುಕೊಂಡಿಲ್ಲ. ವಿಶ್ವದರ್ಜೆಯ ಅತ್ಯಾಧುನಿಕ ಸೌಲಭ್ಯ ವುಳ್ಳ ರಸ್ತೆ ನಿರ್ಮಾಣ‌ ಕಾಮಗಾರಿ ವಿವಿಧ ಇಲಾಖೆಗಳ ಅಧಿಕಾರಿಗಳ‌ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ. ಹೆಸ್ಕಾಂ ಹಾಗೂ ಜಲಮಂಡಳಿ ಪರಸ್ಪರ ಸಮನ್ವಯತೆ ಸಾಧಿಸಿ ಕೆಲಸ‌ ಮಾಡುವಂತೆ ತಾಕಿತು ಮಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಪ್ರಲ್ಹಾದ್ ಜೋಶಿ ಸಹ ಅಧಿಕಾರಗಳಿಗೆ ಗಡುವಿನೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ಇಲ್ಲಸಲ್ಲದ ನೆಪವೊಡ್ಡಿ ಕಾಮಗಾರಿ ವಿಳಂಭವಾದ್ರೆ ಜನತೆಗೆ ಉತ್ತರಿಸುವುದು ಕಷ್ಟವಾಗಲಿದೆ ಎಂದರು.

Like our news?